ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಮರಿ ಚಿಟ್ಟಾಣಿ ಯಕ್ಷ ರಂಗಪ್ರವೇಶ

ಲೇಖಕರು : ಬಾಲಕೃಷ್ಣ ಶಿಬಾರ್ಲ
ಶುಕ್ರವಾರ, ನವ೦ಬರ್ 22 , 2013

ಯಕ್ಷ ದಿಗ್ಗಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮೊಮ್ಮಗ ಕಾರ್ತಿಕ್ ಸುಬ್ರಹ್ಮಣ್ಯ ಹೆಗಡೆ ಗೆಜ್ಜೆ ಕಟ್ಟುವ ಮೂಲಕ ಚಿಟ್ಟಾಣಿ ಕುಟುಂಬದಿಂದ ಮತ್ತೊಂದು ಯಕ್ಷ ಪ್ರತಿಭೆ ರಂಗಪ್ರವೇಶ ಮಾಡಿದೆ.

ಚಿಟ್ಟಾಣಿಯವರ ಮಕ್ಕಳು, ಮೊಮ್ಮಕ್ಕಳು, ಮನೆಯ ಹೆಣ್ಮಕ್ಕಳು ಸಹಿತ ಎಲ್ಲರೂ ಯಕ್ಷಗಾನ ಕಲಿತವರೇ ಆದರೂ ಕೆಲವರಷ್ಟೆ ಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದವರು ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಕಾರ್ತಿಕ್ ಹೆಗಡೆ ಎಂಬ ಹುಡುಗ ಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದು, ಅಜ್ಜ ಮತ್ತು ಅಪ್ಪನ ಜತೆಗೆ ರಂಗದಲ್ಲಿ ಮೆರುಗು ಮೂಡಿಸುತ್ತಿದ್ದಾರೆ.

ಉಡುಪಿ ರಾಜಾಂಗಣದಲ್ಲಿ ಯಕ್ಷಗಾನದಲ್ಲಿ ದಿಗ್ಗಜ ಚಿಟ್ಟಾಣಿ ಜತೆ ಪಾತ್ರ ವಹಿಸಲು ಆಗಮಿಸಿದ್ದ ಈ ಪುಟಾಣಿ ಚಿಟ್ಟಾಣಿ ವಿಜಯ ಕರ್ನಾಟಕ ಜತೆ ತನ್ನ ಸಂಭ್ರಮ ಹಂಚಿಕೊಂಡರು.

ಯಕ್ಷಗಾನ ಕುಟುಂಬದಲ್ಲಿ ಹುಟ್ಟಿರುವುದರಿಂದ ಯಕ್ಷಗಾನ ಕಡೆಗೆ ಸಹಜವಾಗಿ ಆಸಕ್ತ್ತಿ ಬೆಳೆದಿದೆ. ಹಾಗಾಗಿ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅಪ್ಪ ಮತ್ತು ಅಜ್ಜನ ಜತೆ ಪೂರ್ಣಕಾಲಿಕ ಕಲಾವಿದನಾಗಿ ಕಳೆದ ಒಂದೂವರೆ ವರ್ಷದಿಂದ ತೊಡಗಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಅರ್ಧದಲ್ಲಿ ನಿಲ್ಲಿಸಿರುವುದಕ್ಕೆ ಅಪ್ಪ ಮತ್ತು ಅಜ್ಜ ಇಬ್ಬರೂ ಬೈದಿದ್ದಾರೆ. ಮುಕ್ತ ವಿವಿಯಲ್ಲಾದರೂ ಶಿಕ್ಷಣ ಮುಂದುವರಿಸಲು ಒತ್ತಡ ಹೇರುತ್ತಿದ್ದಾರೆ. ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಹಾಗಾಗಿ ಪಾತ್ರಕ್ಕೆ ಸರಿಯಾಗಿ ಮಾತುಗಾರಿಕೆ ಇರಬೇಕು. ಅದಕ್ಕೆ ಶಿಕ್ಷಣ ಇರಬೇಕು ಎಂಬುದು ಅವರ ಒತ್ತಡದ ಹಿನ್ನೆಲೆಯಾಗಿದೆ.

ಯಕ್ಷಗಾನದಲ್ಲಿ ಅಜ್ಜನೇ ರೋಲ್ ಮಾಡೆಲ್. ಅಜ್ಜನ ಕೀಚಕ ಮೆಚ್ಚಿನ ಪಾತ್ರ. ತನಗೆ ಕಿರೀಟಗಳ ಪಾತ್ರ ಇನ್ನು ಒಗ್ಗಬೇಕಷ್ಟೆ. ಕುಣಿತಕ್ಕೆ ಅವಕಾಶ ಹೆಚ್ಚಿರುವ ಪುಂಡುವೇಷಗಳಾದ ಸುಧನ್ವ, ಲವ, ಕುಶ, ಅಭಿಮನ್ಯು ಪಾತ್ರಗಳು ಇಷ್ಟ. ಯಕ್ಷಗಾನವನ್ನು ಹೊಸ್ತೋಟ ಮಂಜುನಾಥ ಭಾಗವತರಲ್ಲಿ 3 ವರ್ಷ ಕಲಿತಿದ್ದು, ಬೇರೆಯವರಿಗೆ ಹೆಜ್ಜೆ ಹೇಳಿಕೊಡುವಷ್ಟು ಕಲಿಸಿಕೊಟ್ಟಿದ್ದಾರೆ. ಮುಂದೆ ಅಜ್ಜನ ಎತ್ತರಕ್ಕೆ ಏರುವ ಪ್ರಯತ್ನಿಸುವುದೇ ತನ್ನ ಉದ್ದೇಶ ಎಂದು ಸಂಭ್ರಮದಿಂದ ಹೇಳಿಕೊಂಡರು. ಚಿಟ್ಟಾಣಿ ಕುಟುಂಬದ ಕುಡಿಯ ಆಶಯ ಈಡೇರುವಂತಾಗಲಿ ಎಂಬುದು ಯಕ್ಷಪ್ರೇಮಿಗಳ ಹಾರೈಕೆಯಾಗಿದೆ.

ಓದಬೇಕು. ಕೇಳಬೇಕು. ತಿಳಿಯಬೇಕು. ಪ್ರಯತ್ನ ವಿನಃ ಫಲ ಸಿಗುವುದಿಲ್ಲ. ಯಕ್ಷಗಾನದಲ್ಲಿ ಬೆಳೆಯಲು ಅವಕಾಶ ಇದೆ. ಅದಕ್ಕೆ ಪೂರಕವಾದ ವಾತಾವರಣವೂ ಇದೆ. ಹಾಗಾಗಿ ಕಲಿಕೆ ಜತೆಗೆ ಯಕ್ಷಗಾನದಲ್ಲಿ ಕಾರ್ತಿಕ ಮಿಂಚಬೇಕು ಎಂಬುದು ನಮ್ಮ ಆಸೆ. - ಚಿಟ್ಟಾಣಿ ರಾಮಚಂದ್ರ ಹೆಗಡೆ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ

ಅಪ್ಪ ಚಿಟ್ಟಾಣಿ ರಾಮಚಂದ್ರ ಹೆಗಡೆ ಎರಡನೇ ತರಗತಿ ಕಲ್ತಿದ್ದು, ತಾನು 10ನೇ ತರಗತಿ ಕಲ್ತಿದ್ದೇನೆ. ಅವರ ಎರಡನೇ ತರಗತಿಗೆ ನನ್ನ 10 ತರಗತಿ ಸಮವಾಗಿಲ್ಲ. ನನ್ನ 10ನೇ ತರಗತಿಗೆ ಮಗನ ಪಿಯುಸಿ ಸಮವಲ್ಲ. ವಿದೇಶಕ್ಕೆ ಯಕ್ಷಗಾನ ಒಯ್ಯಬೇಕಿದ್ದರೆ ವ್ಯವಹಾರಕ್ಕಾಗಿ ಇಂಗ್ಲಿಷ್ ಕೂಡಾ ಬೇಕು. ಅದಕ್ಕಾಗಿ ಕಾರ್ತಿಕನಿಗೆ ಕಲಿ. ಆನಂತರ ಯಕ್ಷಗಾನಕ್ಕೆ ಬಾ ಎಂದು ಹೇಳುತ್ತಿದ್ದೇವೆ. ಆದರೆ ಆತ ಮಾತು ಕೇಳುತ್ತಿಲ್ಲ . - ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ , ಪ್ರಸಿದ್ಧ ಕಲಾವಿದ (ಕಾರ್ತಿಕ್ ಚಿಟ್ಟಾಣಿಯ ತಂದೆ)



ಕೃಪೆ : http://vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ